ನಿಟ್ಟೂರು ಪ್ರೌಢಶಾಲೆಗೆ ಕರ್ಣಾಟಕ ಬ್ಯಾಂಕ್ನಿಂದ ಶಾಲಾ ವಾಹನ ಕೊಡುಗೆ

 

‘ಸುವರ್ಣ ಪರ್ವ’ ಆಚರಿಸುತ್ತಿರುವ ಉಡುಪಿಯ ನಿಟ್ಟೂರು ಪ್ರೌಢಶಾಲೆಗೆ ಕರ್ಣಾಟಕ ಬ್ಯಾಂಕ್ ತನ್ನ ಸಿ.ಎಸ್.ಆರ್ ನಿಧಿಯಿಂದ 15 ಲಕ್ಷಮೊತ್ತದ 20 ಆಸನಗಳ ವಾಹನವನ್ನು ಕೊಡುಗೆಯಾಗಿ ನೀಡಿದೆ. ಜೂನ್ 18, 2020ರಂದು ಮಂಗಳೂರಿನ ಪ್ರಧಾನ ಕಛೇರಿಯ ಮುಂಭಾಗದಲ್ಲಿ ಬ್ಯಾಂಕಿನ ಆಡಳಿತ ನಿರ್ದೇಶಕರಾದ ಶ್ರೀ ಮಹಾಬಲೇಶ್ವರ ಎಮ್.ಎಸ್. ಅವರು ನಿಟ್ಟೂರು ಎಜುಕೇಶನಲ್ ಸೊಸೈಟಿಯ ಅಧ್ಯಕ್ಷ ಹಾಗೂ ಶಾಸಕರಾದ ಶ್ರೀ ಕೆ. ರಘುಪತಿ ಭಟ್‍ರಿಗೆ ವಾಹನದ ಕೀ ನೀಡುವುದರ ಮೂಲಕ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಅಧಿಕಾರಿಗಳಾದ ವೈ. ವಿ. ಬಾಲಚಂದ್ರ ರಾವ್, ಗೋಕುಲ್‍ದಾಸ್ ಪೈ, ಮಂಜುನಾಥ ಭಟ್, ಶ್ರೀನಿವಾಸ ದೇಶಪಾಂಡೆ ಹಾಗೂ ಸೊಸೈಟಿಯ ಉಪಾಧ್ಯಕ್ಷ ಎಮ್. ಗಂಗಾಧರ ರಾವ್, ಶಾಲಾ ಮುಖ್ಯೋಪಾಧ್ಯಾಯ ಮುರಲಿ ಕಡೆಕಾರ್ ಉಪಸ್ಥಿತರಿದ್ದರು.