ನಿಟ್ಟೂರು ಪ್ರೌಢ ಶಾಲೆಯ ಸುವರ್ಣ ಪರ್ವ ನಿಮಿತ್ತ ಹಮ್ಮಿಕೊಂಡ ಹಡಿಲುಗದ್ದೆ ಬೇಸಾಯದ ಅಭಿಯಾನ 15/07/2020 ರಂದು , ಕರ೦ಬಳ್ಳಿ ಯಲ್ಲಿ ಸುಮಾರು ಒಂಬತ್ತು ಎಕರೆ ಗದ್ದೆಯಲ್ಲಿ ನಾಟಿಕಾರ್ಯದ ಮೂಲಕ ಯಶಸ್ವಿಯಾಗಿ ಸಂಪನ್ನಗೊಂಡಿತು. ಶಾಸಕರು ಹಾಗೂ ನಿಟ್ಟೂರು ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ಕೆ. ರಘುಪತಿ ಭಟ್ಟರು ತನ್ನ ಮೂವರು ಮಕ್ಕಳೊಂದಿಗೆ ನಾಟಿ ಕಾರ್ಯದಲ್ಲಿ ಪಾಲ್ಗೊಂಡು ಪ್ರೋತ್ಸಾಹಿಸಿರುವುದು ಅವರಿಗಿರುವ ಸಾಮಾಜಿಕ ಬದ್ಧತೆಗೆ ಧ್ಯೋತಧ್ಯೋತಕವಾಗಿದೆ. ಮಳೆಯ ನಡುವೆಯೂ ಹಳೆ ವಿದ್ಯಾರ್ಥಿಗಳು, ವಿಧ್ಯಾರ್ಥಿಗಳು, ಶಿಕ್ಷಕರು, ರಕ್ಷಕರು ಹಾಗೂ ಊರ ಮಂದಿ ಕೃಷಿ ಹಬ್ಬವೆಂಬಂತೆ ನೇಜಿ ನೆಟ್ಟು ಸಂಭ್ರಮಿಸಿದರು. ಇದಕ್ಕಾಗಿ ಹಗಲಿರುಳೂ ಶ್ರಮಿಸಿದ ಹರೀಶ್ ಆಚಾರ್ಯ, ಗಿರಿಧರ ಆಚಾರ್ಯ, ಬಾಲಚಂದ್ರ ಮತ್ತು ಬಳಗಕ್ಕೆ ನಾವು ಶರಣು. ಜುಲೈ 18ಕ್ಕೆ ಪೆರಂಪಳ್ಳಿಯಲ್ಲಿ ಕೃಷಿ ಯಜ್ಞದ ಮೊದಲ ಹಂತದ ಮುಕ್ತಾಯ.